Wednesday, January 18, 2017

* ಅಜ್ಞಾನದ ಹಾದಿ *
ರಚನೆ- ಮನೋಹರ.ಎಸ್                                                manu gowthally/facebook.com














ದೇಶವೇ ಅಜ್ಞಾನದ ಹಾದಿಯಲ್ಲಿ ಕೊರಗುತಿರಲು
ಜ್ಞಾನವನ್ನು ನಂಬಲು ಮುಂದಾಗದ ಜನರ ಮುಂದೆ 
ಏನು ಮಾಡಲಿ, ನಾನೇನು ಮಾಡಲಿ?

ಸಂಪ್ರದಾಯಗಳ ಸರಮಾಲೆಯಲ್ಲಿ ಮಿಂದ ಜನರು
ಮೃಗಗಳಿಗೆ ಮೃಗವಾಗಿರುವಾಗ
ಏನು ಮಾಡಲಿ, ನಾನೇನು ಮಾಡಲಿ?

ಮಾನವರು ನಾವು, ನಾವೆಲ್ಲರೂ ಒಂದೇ ಆದರೂ
ಜಾತಿ ಎಂಬ ಸೂರ್ಯನ ಸುತ್ತ ಸುತ್ತುವ
ಗ್ರಹಗಳ ನೋಡಿ ಏನು ಮಾಡಲಿ, ನಾನೇನು ಮಾಡಲಿ?

ಜಾತಿಯೆಂಬುದು ಅಂಧಕಾರ ಎಂಬುದನ್ನು
ಅರಿಯದ ಜನತೆ ತಮ್ಮ-ತಮ್ಮಲ್ಲೇ ಬೇದ ಬಾವ 
ಮಾಡಿಕೊಳ್ಳುವಾಗ ಏನು ಮಾಡಲಿ, ನಾನೇನು ಮಾಡಲಿ?

ಮಾಡಲಿಲ್ಲ ಧರ್ಮವ ಮಹಾವೀರ, ಬುದ್ಧರು
ಸಾರಿದರು ತತ್ವವ, ಅಹಿಂಸೆ ಸಂದೇಶವ
ಇದನ್ನರಿಯದ ಜನರ ಮುಂದೆ ಏನು ಮಾಡಲಿ, ನಾನೇನು ಮಾಡಲಿ?

ರಾಜರಾಮ್, ಸರಸ್ವತಿ, ಗಾಂಧೀಜಿ, ಅಂಬೇಡ್ಕರ್
ಪಟ್ಟರು ಪ್ರಯತ್ನ ತೊಲಗಿಸಲು ಅಜ್ಞಾನ
ಇದನ್ನರಿಯದ ಜನತೆ ಆಧರಿಸದಿರಲು
 ಏನು ಮಾಡಲಿ, ನಾನೇನು ಮಾಡಲಿ?

"ಕಾಯಕದಲ್ಲಿ ದೈವ, ಕಾರ್ಯವೇ ಧರ್ಮ"
ಈ ಸಂದೇಶವರಿತರೆ ಆಗುವುದು
ಸರ್ವಸಮಾನ ಜೀವನ.
                                                                
  
                                                                                                     -MANU GOWTHALLY

Tuesday, January 17, 2017





   ರಚನೆ : ಮನೋಹರ.ಎಸ್                                                             manusundar6@gmail.com



                                                                                
        
                


       
         ಅಂದೊಂದು ಕಾಲವಿತ್ತು. ಆ ಸಮಾಜದಲ್ಲಿ ಜಾತಿ ಪದ್ದತಿಗಳಿರಲಿಲ್ಲ. ಸಮಾಜದಲ್ಲಿ ಎಲ್ಲರು ಒಂದೇ, ಅಲ್ಲಿ ಮಹಿಳೆಯರನ್ನು ಒಳಗೊಂಡಂತೆ ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸಮಾನತೆ ಇತ್ತು ಅದು ವೇದಗಳಿಗಿಂತ ಹಿಂದಿನ ಕಾಲ ಹಾಗೂ ಋಗ್ವೇದದ ಕಾಲ.
         ಆದರೆ ಜನರು ಮುಂದುವರೆದಂತೆ ತಮ್ಮ-ತಮ್ಮಲ್ಲೆ ವ್ಯವಹರಿಸುತ್ತಾ ಬಂದಂತೆ ಸಮಾಜದಲ್ಲಿ ಚಾತುರ್ವಣ್ರ್ಯ ಪದ್ದತಿಯು ಅಸ್ತಿತ್ವಕ್ಕೆ ಬಂತು. ಅಂದರೆ ವ್ಯಕ್ತಿ ತಾನು ಮಾಡುವ ಕೆಲಸದ ಆಧಾರದ ಮೇರೆ ಆತನ ಜಾತಿ ನಿರ್ಧಾರವಾಗುತ್ತಿತ್ತು. ಅಂದರೆ ಪೂಜಾ ಕಾರ್ಯದಲ್ಲಿ ತೊಡಗಿರುವವರು ಬ್ರಾಹ್ಮಣ”, ದೇಶದ ರಕ್ಷಣೆ ಅಥವಾ ಆಳುವ ಅಧಿಕಾರ ಹೊಂದಿರುವವರು ಕ್ಷತ್ರೀಯ”, ವ್ಯಾಪಾರ ವ್ಯವಹಾರದಲ್ಲಿ ತನ್ನ ಜೀವನ ಕಳೆಯುವವ ವೈಷ್ಯ”, ಈ ಮೇಲಿನ ಎಲ್ಲಾ ವರ್ಗದ ಜನರ ಸೇವೆಯನ್ನು ಮಾಡುವುದರ ಮೂಲಕ ತನ್ನ ಬದುಕು ನಡೆಸುವವ ಶೂದ್ರಎಂದು ನಾಲ್ಕು ರೀತಿಯ ವರ್ಣ ವ್ಯವಸ್ಥೆಗಳು ಋಗ್ವೇದದ ನಂತರದ ಕಾಲದಲ್ಲಿ ಅಂದರೆ ಉತ್ತರವೈಧಿಕ ಕಾಲದಲ್ಲಿ ರೂಪುಗೊಂಡು ಜಾತಿವ್ಯವಸ್ಥೆಯ ಹುಟ್ಟಿಗೆ ಕಾರಣವಾಯಿತು.
     ಮುಂದುವರೆದಂತೆ ವ್ಯಕ್ತಿಯು ತಾನು ಮಾಡುವ ಕೆಲಸವೇ ಆತನ ಜಾತಿಯಾಗಿ ಪರಿವರ್ತನೆಯಾಯಿತು.
ಉದಾಹರಣೆಗೆ : ಕಮ್ಮಾರ, ಚಮ್ಮಾರ, ನೇಯುವವ ಇತ್ಯಾದಿ.

ವೇದಗಳ ಕಾಲದಲ್ಲಿ ಬ್ರಹ್ಮ ದೇವರ ಹೆಸರಿನಲ್ಲಿ ವರ್ಗ ವ್ಯವಸ್ಥೆಯನ್ನು ಮಾಡಲಾಗಿತ್ತು.


1.ಬ್ರಹ್ಮನ ತಲೆಯಿಂದ ಉದ್ಭವಿಸದವನು ಬ್ರಾಹ್ಮಣ”.
2.ಬ್ರಹ್ಮನ ತೋಳಿನಿಂದ ಉದ್ಭವಿಸಿದವನು ಕ್ಷತ್ರೀಯ”.
3.ಬ್ರಹ್ಮನ ತೊಡೆಯಿಂದ ಉದ್ಭವಿಸಿದವನು ವೈಷ್ಯ”.
4.ಬ್ರಹ್ಮನ ಪಾದದಿಂದ ಉದ್ಭವಿಸಿದವನು ಶೂದ್ರ”.

ಆದರೆ ಈ ನಡುವೇ ಪ್ರಸ್ಥಾಪಿಸಿರುವ ಜಾತಿಎಂಬುದು ಏನು? ಮತ್ತು ಅದು ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರವೇ ಇಲ್ಲ ಎಂಬುದು ಪ್ರಸ್ತುತ. ಆದರೆ ಇದನ್ನು ಅರಿಯುವುದು ಅಗತ್ಯ.





ಜಾತಿ~ಜಾಸ್ತಿ
          ಇಡೀ ಪ್ರಪಂಚಕ್ಕೆ ಹೋಲಿಸಿ ನೋಡಿದರೆ ರಾಮಜನ್ಮಭೂಮಿಎಂದೇ ಹೆಸರಾಗಿರುವ ಭಾರತ ದೇಶವು ಜಾತಿಯೊಳಗೊಂದು ಜಾತಿ ಅದರೊಳಗೊಂದು ಜಾತಿಯ ಜನರನ್ನು ಹೊಂದಿರುವುದನ್ನು ಕಾಣಬಹುದು. ಈ ಮೂಲಕ ಪ್ರಪಂಚದಲ್ಲಿಯೇ ಅತೀ ಹೆಚ್ಚಿನ ಜಾತಿಯನ್ನು ಹೊಂದಿರುವ ದೇಶವಾಗಿದೆ.
          ಈ ಜಾತಿ ಎಂದರೇನು? ಎಂಬುದಕ್ಕೆ ಸರಿಯಾಗಿ ಉತ್ತರಿಸಲು ಸಾಧ್ಯವಿಲ್ಲದಿದ್ದರೂ, ಜಾತಿಯೆಂಬುದು : ಮನುಷ್ಯನ ಮೇಲೆ ಅಂಟಿರುವ ಹಾಗೂ ಹೋಗದ ಕಲೆಅಥವಾ ಎಣ್ಣೆ ಮಿಶ್ರಿತ ನೀರಿನಂತೆಎನ್ನಬಹುದು. ಹೇಗೆ ನೀರಿನಲ್ಲಿ ಎಣ್ಣೆಯನ್ನು ಮಿಶ್ರ ಮಾಡಿದರೆ, ಅದನ್ನು ಸರಿಪಡಿಸಲು ಸಾಧ್ಯವಿಲ್ಲವೋ ಆ ಮಾದರಿಯಲ್ಲಿ ಜಾತಿ ಎಂಬುವಂತ ಎಣ್ಣೆ, ತಿಳಿ ನೀರಿನಂತೆ ಇದ್ದ ಭಾರತೀಯ ಸಮಾಜದಲ್ಲಿ ಮಿಶ್ರವಾಗಿ ಬಿಟ್ಟಿದೆ.
          ಅದನ್ನು ಸರಿಪಡಿಸುವುದು ಕಷ್ಟಸಾಧ್ಯವಾದ ವಿಚಾರ. ಇದನ್ನು ಈ ಹಿಂದೆ ಬಸವಣ್ಣನವರ ಕಾಲದಿಂದ ಹಿಡಿದು, ದಾಸರ ಕಾಲವನ್ನು ಕಳೆದು, ಸಮಾಜದಲ್ಲಿ ಜಾತಿ ವಿರುದ್ಧ ಹೋರಾಡಿದ ಗಣ್ಯರ ವಿಫಲತೆಯನ್ನು ಗುರುತಿಸಿ ಸ್ಪಷ್ಟ ಪಡಿಸಿಕೊಳ್ಳಬಹುದು. ಇಂದು ಈ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಯಾವೊಂದು ಸರ್ಕಾರವು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರಸ್ತುತ.


ಧರ್ಮ ಮತ್ತು ಜಾತಿ
          ನಾವು ಧರ್ಮ ಮತ್ತು ಜಾತಿಯನ್ನು ಒಂದೇ ಎಂದು ತಿಳಿಯುವ ಅವಶ್ಯಕತೆ ಇಲ್ಲ. ಏಕೆಂದರೆ ಧರ್ಮ ಮತ್ತು ಜಾತಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ.
          ಧರ್ಮವು ಯಾವುದೇ ಒಬ್ಬ ಆದರ್ಶ ವ್ಯಕ್ತಿಯ ಅಥವಾ ಗ್ರಂಥದ ತತ್ವಗಳನ್ನು ಧ್ಯೇಯಗಳನ್ನು ಪ್ರತಿಯೊಬ್ಬರು ಅನುಸರಿಸಲಿ ಈ ಮೂಲಕ ಉತ್ತಮ ಗುಣಗಳಿಂದ ಕೂಡಿದ ಶುದ್ಧ ಸಮಾಜದ ನಿರ್ಮಾಣವಾಗಬೇಕೆಂಬ ಉದ್ದೇಶವನ್ನು ಹೊಂದಿದ್ದರೆ, ಜಾತಿಯೆಂಬುದು ಕೇವಲ ವ್ಯಕ್ತಿಯಲ್ಲಿ ಕೀಳಿರಿಮೆ ಭಾವನೆಯನ್ನು, ಆತನ ದೌರ್ಬಲ್ಯವನ್ನು, ವ್ಯಕ್ತಿಘನತೆಯನ್ನು ಅಂದರೆ ತಾನು ಜಾತಿಯಲ್ಲಿ ಶ್ರೇಷ್ಠ - ಅವನು ಕನಿಷ್ಠ ಅಂದರೆ ಕೀಳು ಜಾತಿಯವನುಎಂಬ ಮೇಲು ಕೀಳು ಮನೋಭಾವನೆಯೊಂದಿಗೆ ಶೋಷಣಾಯುಕ್ತ ಸಮಾಜದ ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂಬುದರಲ್ಲಿ ತಪ್ಪಿಲ್ಲ.
          ಉದಾಹರಣೆಗೆ ವ್ಯಕ್ತಿಯೊರ್ವ ನನಗೆ ಶ್ರೀ ರಾಮನ, ಬಸವಣ್ಣನವರ, ದಾಸರ, ನಾನಕರ, ಬುದ್ಧನ, ಮಹಾವೀರನ ಅಥವಾ ಯೇಸುವಿನ ಆದರ್ಶ ತತ್ವಗಳು ನನ್ನ ಜೀವನಕ್ಕೆ ಉತ್ತಮ ಮೌಲ್ಯಗಳ ಆಧಾರ ಎಂದರೇ ಅದು ಆತನ ಧರ್ಮವನ್ನು ಧರ್ಮದ ಉತ್ತಮ ಮೌಲ್ಯವನ್ನು ಸೂಚಿಸಿದರೆ, ಅದೇ ವ್ಯಕ್ತಿ ನನ್ನ ಕುಲದ ಸಂಪ್ರದಾಯಗಳನ್ನು ಮಾತ್ರ ಅನುಸರಿಸುತ್ತೇನೆ, ಅಂತರ್ಜಾತಿ ವಿವಾಹ ಸಲ್ಲದು, ನೀನು ಬೇರೆ ಕುಲದವನು ನೀನು ನನ್ನ ಮನೆಯೊಳಗೆ ಬರಕೂಡದು ಇನ್ನಿತರ ಭಾವನೆಗಳು ಆತನ ಅನಿಷ್ಟ ಜಾತಿಯ ಮೇಲಿನ ಹೀನ ನಂಬಿಕೆಯನ್ನು ಸೂಚಿಸುತ್ತದೆ ಎಂದರೆ ತಪ್ಪಾಗಲಾರದು.
   

ಜಾತಿಯಾಧರಿಸಿ ಪೂರ್ವದಲ್ಲಾದ ಶೋಷಣೆ
          ಜಾತಿಯೆಂಬುದು ಒಂದು ಅನಿಷ್ಟ ಆಚರಣೆ ಎಂಬುದು ತಿಳಿದಾದ ನಂತರ ಈ ಜಾತಿ ವ್ಯವಸ್ಥೆಯು ಶೀರ್ಷಿಕೆಯೇ ಸೂಚಿಸುವಂತೆ ಯಾವ ಯಾವ ಜನಾಂಗದ ಮೇಲೆ ಶೋಷಿಸಿತು ಎಂಬುದು ಬಹುಮುಖ್ಯ.
         
ಅದರಲ್ಲಿ ಪ್ರಮುಖವಾದವರು ವರ್ಣಪದ್ಧತಿಯಲ್ಲಿ ಕೀಳೆಂದು ಪರಿಗಣಿಸಿದ ಶೂದ್ರ ವರ್ಗ”. ಈ ವರ್ಗದಲ್ಲಿ ಅನುಭವಿಸಿದ ಶೋಷಣೆ ಮತ್ತು ಕಷ್ಟ ಸಮಾಜದ ಯಾವುದೇ ವರ್ಗ ಅನುಭವಿಸಿಲ್ಲ ಎಂದರೆ ತಪ್ಪಿಲ್ಲ.
          ಈ ಶೋಷಣೆಗಳನ್ನು ಇಲ್ಲಿ ತಿಳಿಸುವ ಅವಶ್ಯಕತೆ ಇಲ್ಲವೆನಿಸಿದರೂ, ಹಿಂದೆ ಶೂದ್ರ ವರ್ಗದವರು ಮೇಲ್ವರ್ಗದವರ ಬಳಿ ಸುಳಿಯುವಂತಿಲ್ಲ ಎಂಬುದು, ಮೇಲ್ವರ್ಗದವರ ನೀರನ್ನು ಉಪಯೋಗಿಸುವಂತಿಲ್ಲ ಎಂಬುದು, ಮೇಲ್ವರ್ಗದವರೊಂದಿಗೆ ಸಹಭೋಜನ ಮಾಡಕೂಡದು ಎಂಬುದು, ಕೀಳು ಜಾತಿಯವರ ನೆರಳು ಕೂಡ ಮೇಲ್ವರ್ಗದವರ ಮೇಲೆ ತಾಗಬಾರದು ಎಂಬುದು, ಕೀಳು ಜಾತಿಯವರಿಗೆ ದೇವಾಲಯಕ್ಕೆ ಪ್ರವೇಶ ನೀಡದೇ ಇರುವುದು ತೀರಾ ಕಷ್ಟಕರವಾದ ಕೆಟ್ಟ ಅರ್ಥಹೀನವಾದ ಆಚರಣೆಗಳು ಆಗಿದ್ದವು. ಇಂತಹ ಆಚರಣೆಗಳಿಂದಲೇ ಬೇಸತ್ತ ಕೆಲ ಪ್ರಮುಖರು ಈ ಆಚರಣೆಗಳನ್ನು ತೊಡೆದು ಹಾಕಲು ತಮ್ಮ ಸಾಮಥ್ರ್ಯ ಮೀರಿ ಪ್ರಯತ್ನ ನಡೆಸಿದರೂ ಕೂಡ ಇಂದಿಗೂ ಕೂಡ ಆ ಆಚರಣೆಗಳಲ್ಲಿ ಕೆಲ ಅನಿಷ್ಟ ಆಚರಣೆಗಳು ಜೀವಂತವಾಗಿರುವುದು ದುರ್ದೈವ್ಯಕರ ಸಂಗತಿ.

ವಿಮರ್ಶೆ
         ಸಮಾಜದಲ್ಲಿ ಶೂದ್ರ ಜನಾಂಗದ ವ್ಯಕ್ತಿಯ ಮೇಲೆ ತೊಡಿಸಲಾಗಿದ್ದ ಕೀಳು ಜಾತಿಯವರು ಎಂಬ ಉಡುಪನ್ನು ಬಿಚ್ಚಲು ಸಾಧ್ಯವಿಲ್ಲ ಎಂಬುದು ಆ ಕಾಲದಿಂದ ಹಿಡಿದು ಈ ಕಾಲದಲ್ಲಿಯು (21 ನೇ ಶತಮಾನ) ಪ್ರಸ್ತುತ.
ಆದರೆ ವಿಮರ್ಶೆ ಮಾಡಿದಾಗ ಶೂದ್ರ ವರ್ಗದವರು ಎನ್ನುವ ವ್ಯಕ್ತಿಗಳು ಕೂಡ ಇತರ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ವರ್ಗದವರ ಮಾದರಿಯಲ್ಲಿಯೇ ಅವರು ಮನುಷ್ಯರು.
 ಯಾರು ಕೂಡ ವಿಚಿತ್ರವಾಗಿ ಜನಿಸುವುದಿಲ್ಲ, ಎಲ್ಲರೂ ಕೂಡ ತಾಯಿಯ ಗರ್ಭದಿಂದ ಭ್ರೂಣವಾಗಿ ನಂತರ ಮಗುವಾಗಿ ಜನಿಸುವುದು. ಎಲ್ಲರೂ ಕೂಡ ಏಕಾಂಗಿಯಾಗಿ ಸಾಯುವುದು.
ಆದರೇ ಈ ನಡುವೇ ಜಾತಿಯೇಕೆ? ಏಕೆ ಬೇಧ ಭಾವ ಎಂಬುದನ್ನು ಗಮನಿಸಿದರೆ, ಪ್ರತಿಯೊಂದು ವರ್ಗದಲ್ಲಿಯು ವ್ಯತ್ಯಾಸಗಳಿವೆ. ವ್ಯಕ್ತಿಯು ತಾನು ಮಾಡುವ ಕೆಲಸ ಮೇಲು-ಕೀಳು ಎಂಬುದನ್ನು ತನ್ನ ಮನಸಿನಲ್ಲಿಯೇ ನಿಗಧಿಪಡಿಸಿಕೊಂಡು ತನ್ನ ಬಗ್ಗೆಯೇ ತಾನು ಶ್ರೇಷ್ಠ ಮತ್ತು ಕನಿಷ್ಠ ಎಂಬುದನ್ನು ನಿಗಧಿಪಡಿಸಿಕೊಂಡು ಬಿಡುತ್ತಾನೆ. ಆದರೆ ಇಲ್ಲಿ ಗಮನಿಸಬೇಕಾಗಿರುವ ವಿಚಾರವೆಂದರೆ ಹೇಗೆ ರೋಗವೊಂದು ಮೊದಲು ವ್ಯಕ್ತಿಯೊರ್ವನಿಂದ ಇಡೀ ಸಮಾಜಕ್ಕೆ ಹರಡುತ್ತದೆಯೋ ಹಾಗೆ ಜಾತಿ ಎಂಬ ರೋಗ ವ್ಯಕ್ತಿಯ ಮನಸ್ಸಿನಲ್ಲಿಯೇ ಮೊದಲು ಉಂಟಾಗಿ ಸಮಾಜವನ್ನು ಆವರಿಸುವಂತಹದು್ದ.

ಆಧುನಿಕ ಕಾಲದಲ್ಲಿ ಜಾತಿ ವ್ಯವಸ್ಥೆ
          ಆಧುನಿಕ ಕಾಲದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಹೇಳುವಾಗ ಆ ಕಾಲದಲ್ಲಿ ಜಾತಿ ವ್ಯವಸ್ಥೆ ಇದ್ದ ರೀತಿಯಲ್ಲಿ ಶೋಷಣೆ ಈ ಕಾಲದಲ್ಲಿ ಇಲ್ಲವಾದರು, ಜಾತಿ ಎಂಬುವುದು ಬೂದಿ ಮುಚ್ಚಿದ ಕೆಂಡದಂತಿದೆಎಂದರೆ ತಪ್ಪಾಗಲಾರದು.
ಸ್ವಾತಂತ್ರ್ಯ ಪೂರ್ವಕಾಲದಲ್ಲಿದ್ದ ಕೆಟ್ಟ ಆಚರಣೆಗಳು ಸ್ವಾತಂತ್ರ್ಯ ನಂತರದ ಕಾಲದಲಿ ್ಲ ಸಂವಿಧಾನದ ಬೆಳವಣಿಗೆಯಿಂದ , ಸಮಾಜ ಸುಧಾರಕರ ಪ್ರಯತ್ನದಿಂದ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದಂತಾದರು ಇದು ಕೇವಲ ನೋಡುಗರ ಕಣ್ಣಿಗೆ ಮಾತ್ರ. ಸಮಾಜದ ಒಳಗೆ ಆಳವಾಗಿ ಇಳಿದು ನೋಡಿದಾಗ ಇದು ಇನ್ನೂ ಇರುವುದು ಅರಿವಾಗುತ್ತದೆ.
ಒಂದು ಉದಾಹರಣೆ ಎಂದರೆ ಇಂದಿಗೂ ಕೆಲವು ಗ್ರಾಮದಲ್ಲಿ ದೇವಾಲಯದೊಳಕ್ಕೆ ಅಸ್ಪøಶ್ಯರೆನಿಸಿಕೊಂಡವರನ್ನು ಪ್ರವೇಶಕ್ಕೆ ಅವಕಾಶ ಕೊಡದೇ ಇರುವುದನ್ನು ಗಮನಿಸಿದಾಗ ಜಾತಿ ವ್ಯವಸ್ಥೆ ಹೀನ ಉಳಿವಿಕೆಯನ್ನು ಅರಿಯಬಹುದು.

ಶಿಕ್ಷಣದಲ್ಲಿ ಜಾತಿಯ ಸಮಸ್ಯೆ
ಸ್ವಾತಂತ್ರ್ಯ ನಂತರದಿಂದ ಸಂವಿಧಾನದ ಮೂಲಕ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕೆಂದು ಪ್ರಯತ್ನಿಸುತ್ತಿರುವ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನೂ ಕೂಡ ಜಾತಿ ವ್ಯವಸ್ಥೆಯನ್ನೇ ಗುರುತಿಸುತ್ತಿರುವುದು ವಿಪರ್ಯಾಸದ ಸಂಗತಿ.
ನನ್ನ ಅನುಭವದಂತೆ ಶಿಕ್ಷಣ ಕ್ಷೇತ್ರದಲ್ಲಿ ಜಾತಿಯನ್ನು ಪ್ರಸ್ತಾಪಿಸುತ್ತಿರುವುದರಿಂದ, ಅನೇಕ ಅಸ್ಪøಶ್ಯ ವಿದ್ಯಾರ್ಥಿಗಳೆನಿಸಿಕೊಂಡವರು ಎಲ್ಲರ ಮುಂದೆ ನನ್ನದು ಈ ಜಾತಿ ಎಂದು ಹೇಳಿಕೊಳ್ಳಲು ಮುಜುಗರ ಅಥವಾ ಕೀಳು ಮನೋಭಾವನೆಯನ್ನು ತಾಳುತ್ತಾರೆ. ಇದು ಅವರು ಹೊಂದಿರುವ ಕೆಟ್ಟ ಮನೋಭಾವನೆ ಎಂದಾದರು ಸಮಾಜದಲ್ಲಿ ಅವರನ್ನು ಕಾಣುವ ರೀತಿಯ ಮೇಲೆ ಅವರ ಮನೋಭಾವನೆ ನಿರ್ಧಾರವಾಗುತ್ತದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿಪದ್ಧತಿಯನ್ನು ತಂದಿರುವುದೇ ತಪ್ಪು. ಏಕೆಂದರೆ ಸಮಾಜದ ಅರಿವೇ ಇರದ ಮಕ್ಕಳಲ್ಲಿ ಸಮಾಜ ಎಂದರೇನು ಎನ್ನುವಂತಹ ವಿಚಾರನ್ನು ತುಂಬುವ ಕಾರ್ಯ ಶಿಕ್ಷಣದ್ದಾಗಿರುತ್ತೇ. ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿಯನ್ನು ತಂದಿರುವುದರಿಂದ ಮೇಲ್ವರ್ಗದ ವಿದ್ಯಾರ್ಥಿಗಳೆನಿಸಿಕೊಂಡವರಲ್ಲಿ ಕೆಳಜಾತಿಯವರಿಗೆ ಸರ್ಕಾರ ನೀಡಿರುವ ಉತ್ತಮ ಸೌಲಭ್ಯಗಳಿಂದ  ಅನ್ಯತಾ ಭಾವನೆ ಉಂಟಾಗಿ ಜಾತಿವ್ಯವಸ್ಥೆಎನ್ನುವಂತಹದ್ದು ಮನಸ್ಸಿನ ಆಳದ ಮೇಲೆ ಪ್ರಭಾವ ಬೀರಿ ಅವರಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಒಂದು ರೀತಿಯ ಕಾರಣವಾಗುತ್ತಿದೆ. ಇದು ಜಾತಿ ವ್ಯವಸ್ಥೆ ಶಿಕ್ಷಣ ಕೇತ್ರದಲ್ಲಿ ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಪರಿಣಾಮ. ಇದು ಸರಿಹೋಗಬೇಕು.




ಸಲಹೆ ಅಥವಾ ಪರಿಹಾರ
          ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿಯನ್ನು ಗುರುತಿಸುತ್ತಿದ್ದಾರೆ  ಎಂಬುದು ತಿಳಿಯುವುದು ಅವರು ಪಡೆಯುತ್ತಿರುವ ಜಾತಿ ಪ್ರಮಾಣ ಪತ್ರದ ಮೂಲಕ. ಇಂತಹ ಜಾತಿವ್ಯವಸ್ಥೆಯನ್ನು ಶಿಕ್ಷಣದಿಂದ ತೆಗೆಯಬೇಕಾದರೆ.
1. ಪ್ರಾಥಮಿಕ ಹಂತದಿಂದಲೂ ವಿದ್ಯಾರ್ಥಿಗಳಿಂದ ಜಾತಿ ಆಧಾರಿತ ಪ್ರಮಾಣ ಪತ್ರ ಪಡೆಯುವುದನ್ನು ಹಾಗೂ ನೀಡುವುದನ್ನು ನಿಲ್ಲಿಸಬೇಕು.
2.ವಿದ್ಯಾರ್ಥಿಗಳಿಗೆ ಜಾತಿ ಆಧಾರಿತವಾಗಿ ನೀಡುವ ಸವಲತ್ತು, ವಿದ್ಯಾರ್ಥಿ ವೇತನಗಳನ್ನು ಕೊನೆಗೊಳಿಸಬೇಕು.
3.ವಿದ್ಯಾರ್ಥಿಗಳಿಗೆ ಜಾತಿಯಾದರಿಸಿ ಉದ್ಯೋಗದಲ್ಲಿ ಇನ್ನಿತರ ಕ್ಷೇತ್ರದಲ್ಲಿ ಮೀಸಲಾತಿ ನೀಡುವುದನ್ನು ನಿಲ್ಲಿಸಬೇಕು.
4.ಬದಲಾಗಿ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಆದಾಯವನ್ನು ಗುರುತಿಸಿ ಅದರ ಆಧಾರದ ಮೇಲೆ ಈ ಎಲ್ಲಾ ಅವಕಾಶಗಳನ್ನು ಮೀಸಲಾತಿಯನ್ನು, ವಿದ್ಯಾರ್ಥಿವೇತನವನ್ನು ನೀಡಬೇಕು.( ಈ ಆದಾಯವನ್ನು ಗುರುತಿಸುವಾಗ ತುಂಬ ಎಚ್ಚರಿಕೆಯಿಂದ ಗುರುತಿಸಬೇಕಾಗುತ್ತದೆ. ಇಲ್ಲವಾದಲ್ಲಿ ಸರ್ಕಾರಿ ಸವಲತ್ತುಗಳ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ.)
         ಆಗ ಮಾತ್ರ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗು ಸಮಾನವಾಗಿ ಯಾವುದೇ ಬೇಧ-ಭಾವವಿಲ್ಲದೆ ಪ್ರಾಶಸ್ತ್ಯವನ್ನು ನೀಡಿದಂತಾಗುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ಜಾತಿವ್ಯವಸ್ಥೆಯನ್ನು ಶಿಕ್ಷಣದಿಂದ ತೆಗೆದು ಹಾಕಲು ಸಾಧ್ಯವಾಗುತ್ತದೆ.


ಮೀಸಲಾತಿ ಯಾರಿಗೆ
ಇಲ್ಲಿ ಏಳುವ ಪ್ರಮುಖ ಸಮಸ್ಯೆಯೆಂದರೆ ಮೀಸಲಾತಿ ಯಾರಿಗೆ? ಎಂಬುವಂತಹದ್ದು. ಈ ಮೀಸಲಾತಿ ಎಂಬುದನ್ನು ಸಮಾಜದ ಕೆಳವರ್ಗದವರಿಗೆ ಡಾ.ಬಿ.ಆರ್.ಅಂಬೇಡ್ಕರ್‍ರವ ಕೊಡುಗೆಯಾಗಿದೆ. ಆದರೆ ಇದರಲ್ಲಿಯು ಅಸಮಾನತೆ ಇದ್ದು SC ಮತ್ತು ST ಗೆ 15% ರಷ್ಟು, ಮಹಿಳೆಯರಿಗೆ 33%ರಷ್ಟು ಹಾಗೂ OBC ಗೆ 3%ರಷ್ಟು ಎಂದು ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ.ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಬಡವರಾಗಿರುವುದಿಲ್ಲ. ಬದಲಾಗಿ ಆರ್ಥಿಕವಾಗಿ ಹಿಂದುಳಿದವರು ಎಲ್ಲಾ ವರ್ಗದಲ್ಲಿಯೂ ಇರುತ್ತಾರೆ.
ಉದಾಹರಣೆಗೆ ಬ್ರಾಹ್ಮಣರಲ್ಲಿಯೂ, ವೈಷ್ಯರಲ್ಲಿಯೂ, ಒಕ್ಕಲಿಗರಲ್ಲಿಯೂ ಇನ್ನಿತರ ವರ್ಗದಲ್ಲಿಯೂ ಹಿಂದುಳಿದವರು ಇದ್ದಾರೆ. ಆದ್ದರಿಂದ ಈ ಮೀಸಲಾತಿಯನ್ನು ವಿದ್ಯಾರ್ಥಿಗಳ ಜಾತಿಯಾಧರಿಸಿ ನೀಡದೇ, ಅವರ ಆರ್ಥಿಕ ಮಟ್ಟಕ್ಕಣುಗುಣವಾಗಿ ನೀಡಿದರೇ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸಮಾನವಾಗಿ ಮುಂದುವರೆಯಬಹುದು ಹಾಗೂ ಅಭಿವೃದ್ಧಿ ಸಾಧಿಸಲು ಮತ್ತು ಜಾತಿ ವ್ಯವಸ್ಥೆಯನ್ನು ಶಿಕ್ಷಣದಿಂದ ತೊಡೆದು ಹಾಕಲು ಸಾಧ್ಯ. ಆದರೆ ಇಲ್ಲಿ ವ್ಯಕ್ತಿಯ ಆರ್ಥಿಕ ಮಟ್ಟವನ್ನು ನಿರ್ಧರಿಸುವಾಗ ಅತ್ಯಂತ ಕಠಿಣ ಕಾನೂನು ಹಾಗೂ ವಿಧಾನದ ಮೂಲಕ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ.

ಕೊನೆಯ ಮಾತು
      ಒಟ್ಟಿನಲ್ಲಿ ಜಾತಿ ಅನ್ನುವಂತಹದ್ದು ಸಮಾಜಕ್ಕೆ ಅಂಟಿರುವ ವಾಸಿಯಾಗದ ಖಾಯಿಲೆಯಂತಿದೆ. ಇದನ್ನು ಹೋಗಲಾಡಿಸುವುದು ಅಸಾಧ್ಯ. ಪ್ರಾಚೀನ ಕಾಲದಿಂದಲೂ ಜನರನ್ನು ಶೋಷಿಸುತ್ತಿರುವ ಈ ಜಾತಿ ವ್ಯವಸ್ಥೆ ಆಧುನಿಕ ಕಾಲದಲ್ಲಿಯೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಮೆರೆಯುತ್ತಿದೆ. ಅಲ್ಲದೆ ಶಿಕ್ಷಣದಲ್ಲಿಯೂ ವಿದ್ಯಾರ್ಥಿಗಳನ್ನು ಶೋಷಿಸುತ್ತಿದೆ. ಆದ್ದರಿಂದ ಇಂತಹ ಜಾತಿ ವ್ಯವಸ್ಥೆಯನ್ನು ತೊಳೆಯುವುದು ಅನಿವಾರ್ಯವಾಗಿದ್ದು, ಇದು ನಮ್ಮೆಲ್ಲರ ಕರ್ತವ್ಯ, ದ್ಯೇಯವು ಆಗಿರಬೇಕೆಂಬುದು ನನ್ನ ಆಶಯವಾಗಿದೆ.

                                                                                  ಮನೋಹರ.ಎಸ್
                                                                                  ಗೌತಹಳ್ಳಿ ಗ್ರಾಮ
                                                                               (ಕಂದಾಯ ಇಲಾಖೆ)
                                                                                 


Subscribe: manugowthally/youtube.com                             Visit: manugowthally/facebook.com

karnataka Budget 2021

ಕರ್ನಾಟಕ ರಾಜ್ಯದ 2021ನೇ ಸಾಲಿನ ಆಯವ್ಯಯದ ಪ್ರಮುಖ ಅಂಶಗಳು ಈ ಕೆಳಗಿನ ಮಾಹಿತಿಯಲ್ಲಿದೆ  ವೀಕ್ಷಿಸಿ.. ...