Wednesday, January 18, 2017

* ಅಜ್ಞಾನದ ಹಾದಿ *
ರಚನೆ- ಮನೋಹರ.ಎಸ್                                                manu gowthally/facebook.com














ದೇಶವೇ ಅಜ್ಞಾನದ ಹಾದಿಯಲ್ಲಿ ಕೊರಗುತಿರಲು
ಜ್ಞಾನವನ್ನು ನಂಬಲು ಮುಂದಾಗದ ಜನರ ಮುಂದೆ 
ಏನು ಮಾಡಲಿ, ನಾನೇನು ಮಾಡಲಿ?

ಸಂಪ್ರದಾಯಗಳ ಸರಮಾಲೆಯಲ್ಲಿ ಮಿಂದ ಜನರು
ಮೃಗಗಳಿಗೆ ಮೃಗವಾಗಿರುವಾಗ
ಏನು ಮಾಡಲಿ, ನಾನೇನು ಮಾಡಲಿ?

ಮಾನವರು ನಾವು, ನಾವೆಲ್ಲರೂ ಒಂದೇ ಆದರೂ
ಜಾತಿ ಎಂಬ ಸೂರ್ಯನ ಸುತ್ತ ಸುತ್ತುವ
ಗ್ರಹಗಳ ನೋಡಿ ಏನು ಮಾಡಲಿ, ನಾನೇನು ಮಾಡಲಿ?

ಜಾತಿಯೆಂಬುದು ಅಂಧಕಾರ ಎಂಬುದನ್ನು
ಅರಿಯದ ಜನತೆ ತಮ್ಮ-ತಮ್ಮಲ್ಲೇ ಬೇದ ಬಾವ 
ಮಾಡಿಕೊಳ್ಳುವಾಗ ಏನು ಮಾಡಲಿ, ನಾನೇನು ಮಾಡಲಿ?

ಮಾಡಲಿಲ್ಲ ಧರ್ಮವ ಮಹಾವೀರ, ಬುದ್ಧರು
ಸಾರಿದರು ತತ್ವವ, ಅಹಿಂಸೆ ಸಂದೇಶವ
ಇದನ್ನರಿಯದ ಜನರ ಮುಂದೆ ಏನು ಮಾಡಲಿ, ನಾನೇನು ಮಾಡಲಿ?

ರಾಜರಾಮ್, ಸರಸ್ವತಿ, ಗಾಂಧೀಜಿ, ಅಂಬೇಡ್ಕರ್
ಪಟ್ಟರು ಪ್ರಯತ್ನ ತೊಲಗಿಸಲು ಅಜ್ಞಾನ
ಇದನ್ನರಿಯದ ಜನತೆ ಆಧರಿಸದಿರಲು
 ಏನು ಮಾಡಲಿ, ನಾನೇನು ಮಾಡಲಿ?

"ಕಾಯಕದಲ್ಲಿ ದೈವ, ಕಾರ್ಯವೇ ಧರ್ಮ"
ಈ ಸಂದೇಶವರಿತರೆ ಆಗುವುದು
ಸರ್ವಸಮಾನ ಜೀವನ.
                                                                
  
                                                                                                     -MANU GOWTHALLY

2 comments:

  1. ಸರಿ ನಿಮ್ಮ ಅಸಹಾಯಕತೆಯ ಕವನದ ಸಾಲುಗಳು ಚನ್ನಾಗಿವೆ...ಕೊನೆ ಸಾಲಿನಲ್ಲಿ ಕಾಯಕದಲ್ಲಿ ದೈವತ್ವ ಕಾಣುವುದಾದರೆ...ಕೆಲವರು...ಅಂದರೆ ಬಹುತೇಕ ಯುವಕರು ಕೆಲಸದಲ್ಲಿನ ಒತ್ತಡದಿಂದ ಮಾನಸಿಕ ನೆಮ್ಮದಿಗೆ ಕೆಲಸವೇ ದೇವರೆಂದು ಪ್ರಾರ್ಥನೆ ಸಲ್ಲಿಸ ಬಹುದಲ್ಲವೇ.....
    ಯಾಕೆ ನಗರ ಪ್ರದೇಶಗಳಲ್ಲಿ ನಾನು ಗಮನಿಸಿದಂತೆ ಬಹುತೇಕರು ದೊಡ್ಡ ಹುದ್ದೆಯಲ್ಲಿರುವವರೇ ದೇವಾಲಯದಲ್ಲಿ ನೆಮ್ಮದಿಗಾಗಿ ಪ್ರಾರ್ಥಿಸುತಿರುತ್ತಾರೆ....

    ನಾಸ್ತಿಕತ್ವವನ್ನು ಪ್ರತಿಪಾದಿಸುವಂತಿರಯವ ನಿಮ್ಮ ಕವನ ವಾಸ್ತವಿಕತೆಗೆ ಪ್ರಶ್ನೆಯಾಗಿದೆ...

    ReplyDelete

karnataka Budget 2021

ಕರ್ನಾಟಕ ರಾಜ್ಯದ 2021ನೇ ಸಾಲಿನ ಆಯವ್ಯಯದ ಪ್ರಮುಖ ಅಂಶಗಳು ಈ ಕೆಳಗಿನ ಮಾಹಿತಿಯಲ್ಲಿದೆ  ವೀಕ್ಷಿಸಿ.. ...