Tuesday, April 18, 2017

ಪ್ರತಿಯೊಬ್ಬ ವ್ಯಕ್ತಿಗೂ ತಾನು ಅಂದುಕೊಂಡ ಗುರಿ ತಲುಪಲು ಬೇಕಾಗಿರುವುದು ಧೃಢ ನಿರ್ಧಾರ  
                                         ಪ್ರಾಮಾಣಿಕ ಪ್ರಯತ್ನ ಜೊತೆಗೆ..
                 ಸಾಮಾನ್ಯವಾಗಿ ದೇವರೆಂದರೇನು, ಆತ್ಮವಿಶ್ವಾಸವೆಂದರೇನು? ದೇವರು ಹಾಗೂ ಆತ್ಮ ವಿಶ್ವಾಸದ ನಡುವಿನ ಸಾಮ್ಯತೆಯೇನು, ವ್ಯತ್ಯಾಸವೇನು ಹಾಗೂ ದೇವರು ಮತ್ತು ಆತ್ಮವಿಶ್ವಾಸದ ನಡುವಿನ ಸಂಬಂದವೇನು ಎಂಬುದನ್ನು ಶ್ರೀ ಸಾಮಾನ್ಯರ ಅಂತರಂಗದ ಚಿಂತನೆಗಳ ವಿಶ್ಲೇಷಣೆಯೇ ದೇವರೆಂಬ ಆತ್ಮವಿಶ್ವಾಸ.
                ಶ್ರೀ ಸಾಮಾನ್ಯರ ಮನಸಲ್ಲಿ ದೇವರೆಂದರೆ ಪುಣ್ಯದ ಪ್ರತೀಖ, ದೇವರನ್ನು ನಂಬಿದರೆ ಒಳಿತು, ದೇವರನ್ನು ನೆನೆದರೆ ಸಾಕು ಎಲ್ಲವೂ ಫಲಿಸುತ್ತದೆ, ದೇವರೇ ಎಲ್ಲವನ್ನು ಮಾಡುತ್ತಾನೆ. ದೇವರು ನಮ್ಮೆಲ್ಲವನ್ನು ಆಟವಾಡಿಸುತ್ತಾನೆ ಎಂಬ ಭಾವನೆ ಇದೆ. ನಾಳಿನ ಬಗ್ಗೆ ಚಿಂತನೆ ಬೇಡ ದೇವರಾಡಿಸಿದಂತೆ ನಡೆದರೆ ಸಾಕು ಎಂಬ ನಿಲುವು.

               ಆದರೆ ದೇವರೆಂದರೇನು ಎಂಬುದೂ ಸಾಮನ್ಯವಾಗಿ ಜನರ ಮನಸ್ಸಲ್ಲಿ, ಶ್ರೀ ಸಾಮನ್ಯರ ಬುದ್ಧಿಯಲ್ಲಿ ಹಿಂದೂಗಳಿಗೆ ಬ್ರಹ್ಮವಿಷ್ಣು-ಮಹೇಶ್ವರ, ಮುಸ್ಲಿಂರಿಗೆ ಅಲ್ಲಾಹು, ಕ್ರೈಸ್ತರಿಗೆ ಯೇಸುಕ್ರಿಸ್ತ ಪ್ರಭುವೇ ದೇವರು. ಆತನೇ ಸೂತ್ರಧಾರ,ಆತನ ಆಟದ ಬೊಂಬೆಗಳೆ ನಾವುಗಳು ಎಂಬುದಾಗಿರುತ್ತದೆ. ಶ್ರೀ ಸಾಮಾನ್ಯನಿಗೆ ಏನಾದರೂ ಒಳಿತಾದರೂ ನಾವು ನಂಬಿದ ದೇವರು ನಮ್ಮನ್ನು ಕೈಬಿಡುವುದಿಲ್ಲ, ಕೆಡುಕಾದರೆ ದೇವರಿಗೆ ನಮ್ಮ ಮೇಲೆ ಕೃಪೆಯಿಲ್ಲ ಎಂಬ ಭಾವನೆ.

             ಒಮ್ಮೆ ಒಬ್ಬ ರೈತ ತನ್ನ ಜಮೀನಿನಲ್ಲಿ ತಾನು ಪೂಜಿಸುತ್ತಿದ್ದ ದೇವರನ್ನು ನಂಬಿ ಉಳಿಮೆ ಮಾಡಿ ಬೆಳೆಯನ್ನು ಬಿತ್ತಿದ. ಬೆಳೆಗೆ ಬೇಕಾದ ಎಲ್ಲಾ ರೀತಿಯ ಸಾಮಾಗ್ರಿಗಳನ್ನು ಕೂಡ ಹಾಕಿದ . ಶ್ರಮಪಟ್ಟು ಜಮೀನಿಗಾಗಿ ದುಡಿದ. ಮಳೆಯು ಚೆನ್ನಾಗಿ ಬಂದಿದ್ದರಿಂದ ಬೆಳೆಯು ಚೆನ್ನಾಗಿ ಬಂದು ಆತ ಸಂತೋಷದಿಂದ ಜೀವನ ಸಾಗಿಸಿ ದೇವರನ್ನು ನೆನೆದ. ಇದಕ್ಕೆ ಕಾರಣ ಆತನಲ್ಲಿದ್ದ ಕಾರ್ಯತತ್ಪರತೆ, ಬೆಳೆಯನ್ನು ಚೆನ್ನಾಗಿ ಮಾಡುತ್ತೇನೆಂಬ ಸ್ಥೈರ್ಯ. ಒಂದು ವೇಳೆ ಆತ ದೇವರಿದ್ದಾನೆ ಎಂದು ಬೆಳೆಯನ್ನು ಬಿತ್ತಿ ಸುಮ್ಮನಿದ್ದರೆ ಯಾವೂಂದು ಬೆಳೆಯು  ಕೂಡ ಬೆಳೆಯುತ್ತಿರಲಿಲ್ಲ. ಇದಕ್ಕೆ ದೇವರನ್ನು ದೂಷಿಸಿದರೆ ಅದು ವಿಪರ್ಯಾಸವೇ ಸರಿ.
             ಹೀಗೆ ನಾವು ನಮ್ಮ ಗೆಲುವಗೆ ದೇವರೆ ಕಾರಣ ಎನ್ನುವುದು,ನಮ್ಮ ವಿಫಲತೆಗೆ ದೇವರೆ ಕಾರಣವೆಂದು ದೂಷಿಸುವುದು ಸರಿಯಲ್ಲ. ನಮ್ಮ ಗೆಲುವಿಗೆ ನಮ್ಮ ಸೋಲಿಗೆ ದೇವರಿಗಿಂತ ಪ್ರಮುಖ ಪಾತ್ರವಹಿಸುವುದು ನಮ್ಮ ಚಲ, ನಮ್ಮ ಪ್ರಯತ್ನ ,ನಮ್ಮ ಕಾರ್ಯ, ನಮ್ಮ ಆತ್ಮ ವಿಶ್ವಾಸ, ಮಾಡಿಯೇ ತೀರುತ್ತೇನೆಂಬ ಅಚಲವಾದ ನಿರ್ಧಾರ.ಇಲ್ಲಿ ದೇವರು ಎಂಬುದು ನಮ್ಮ ಹಿಂದಿನ ಒಂದು ದೃಢವಾದ ಶಕ್ತಿಯಾಗಿ ನಮ್ಮನ್ನು ಮುನ್ನಡೆಸುವ ವಾಹನದ ಗಾಲಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂದರೆ ತಪ್ಪಾಗಲಾರದು.

                 ಶ್ರೀ ಸಾಮಾನ್ಯನ ಜೀವನದ ಹಾಗೂ-ಹೋಗುಗಳನ್ನು ಮೆಲುಕು ಹಾಕುತ್ತಾ ಒಬ್ಬ ವ್ಯಕ್ತಿಗೆ ಒಳ್ಳೆಯ ಸಂಭಾವನೆ ದೊರಕುವ ಉದ್ಯೋಗ ದೊರಕಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ, ಜೀವನದಲ್ಲಿ ಒಳ್ಳೆ ಸಫಲತೆಯನ್ನು ಪಡೆದರೆ ಜನರ ಮಾತಿನಲ್ಲಿ ,ಜನರ ಮನಸ್ಸಿನಲ್ಲಿ ಆತನಿಗೆ ದೇವರ ಕೃಪೆಯಿದೆ; ಆದ್ದರಿಂದಲೇ ಅದು ಸಾಧ್ಯವಾಯಿತೆಂಬ ಭಾವನೆ. ಆದರೆ ನಾವು ವ್ಯಕ್ತಿಗತವಾಗಿ ವಿಶ್ಲೇಷಣೆ ಮಾಡಿದಾಗ ಆತ ಸ್ಥಾನಕ್ಕೆ ಹೋಗಲು ಆತ ಪಟ್ಟ ಪ್ರಯತ್ನ,ಕಷ್ಟ,ಎಲ್ಲದಕ್ಕಿಂತಲೂ ಆತನಲ್ಲಿ ನಾನು ಮಾಡಿಯೇ ತೀರುತ್ತೇನೆಂಬ ಆತ್ಮವಿಶ್ವಾಸ ಸಫಲತೆಗೆ ಮುಖ್ಯ ಕಾರಣವಾಗಿರುತ್ತದೆ.

             ವಿಚಾರ ಹೀಗಿರುವಾಗ ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ನಾವುಗಳು ದೇವರನ್ನು ಕಡೆಗಣಿಸುವಂತಿಲ್ಲ . ನಾವು ಏನೇ ಕಷ್ಟ ಪಟ್ಟಿದ್ದರೂ, ನಾವು ಏನೇ ಪ್ರಯತ್ನಪಟ್ಟಿದ್ದರೂ, ನಮ್ಮ ಆತ್ಮ ವಿಶ್ವಾಸ ಏನೇ ಇದ್ದರೂ ಅದರ ಇನ್ನೊಂದು ಮುಖವೇ ದೇವರು. ಹೇಗೇ ನಾಣ್ಯಕ್ಕೆ ದ್ವಿಮುಖವಿದ್ದರೆ ಸೂಕ್ತವೋ  , ಅದೇ ರೀತಿ ದೇವರು ಮತ್ತು ಆತ್ಮ ವಿಶ್ವಾಸ ಒಂದೇ ನಾಣ್ಯದ ಎರಡು ಮುಖಗಳಂತೆ. ದೇವರು ನನ್ನನ್ನು ಸಫಲನನ್ನಾಗಿ ಮಾಡುತ್ತಾನೆಂದು ನಂಬಿ ನಮ್ಮ ಕೆಲಸವನ್ನು, ನಮ್ಮ ಕಾರ್ಯವನ್ನು, ನಮ್ಮ ಗುರಿಯನ್ನು ಆತ್ಮ ವಿಶ್ವಾಸದೊಂದಿಗೆ ಮಾಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಇಲ್ಲಿ ಕಾರ್ಯರೂಪಗೊಂಡಿದ್ದು ನಮ್ಮ ಶ್ರಮವೇ ಹೊರತು ದೇವರ ಪುಣ್ಯವಲ್ಲ,ಆದರೂ ಅದಕ್ಕೆ ದೇವರ ರೂಪ ಕೊಟ್ಟರೆನೆ ಸೂಕ್ತ ಎಂಬ ವಿಶ್ಲೇಷಣೆಯೇ ನನ್ನ ದೇವರೆಂಬ ಆತ್ಮ ವಿಶ್ವಾಸ ಕಿರು ಲೇಖನ.


                                                                     - ಮನು ಗೌತಳ್ಳಿ    
Feedback : Manu Gowthally/facebook.com
                   Manu Gowthally/youtube.com 


3 comments:

karnataka Budget 2021

ಕರ್ನಾಟಕ ರಾಜ್ಯದ 2021ನೇ ಸಾಲಿನ ಆಯವ್ಯಯದ ಪ್ರಮುಖ ಅಂಶಗಳು ಈ ಕೆಳಗಿನ ಮಾಹಿತಿಯಲ್ಲಿದೆ  ವೀಕ್ಷಿಸಿ.. ...